   ಮೂಲದೊಡನೆ ಪರಿಶೀಲಿಸಿ

ಕೀಟೋನುಗಳು

ಕಾರ್ಬೊನಿಲ್ ಪುಂಜವನ್ನುಳ್ಳ (ಬಲಗಡೆ ಮೇಲಿನ ಚಿತ್ರ) ಸಾವಯವ ಸಂಯುಕ್ತಗಳ ಒಂದು ವರ್ಗ. ಸಾಮಾನ್ಯ ಅಣುಸೂತ್ರವನ್ನುಳ್ಳ (ಕೆಳಗಿನ ಚಿತ್ರ) ಈ ಸಂಯುಕ್ತಗಳಲ್ಲಿ ಖ ಮತ್ತು ಖ'ಗಳು ಆಲ್ಕೈಲ್, ಅರೈಲ್ ಅಥವಾ ಹೆಟೆರೋಸೈಕ್ಲಿಕ್ ಪರಮಾಣುಪುಂಜಗಳಾಗಿರಬಹುದು. 

 

ಚಿತ್ರ-1

 

ಖ ಅಥವಾ ಖ' ಹೆಟೆರೋಸೈಕ್ಲಿಕ್ ಪುಂಜವಾಗಿದ್ದಲ್ಲಿ ಕಾರ್ಬೊನಿಲ್ ಪುಂಜದ ಇಂಗಾಲದ ಜೋಡಣೆಯಾಗಿರುವ ಹೆಟೆರೋಸೈಕ್ಲಿಕ್ ಪುಂಜದ ಪರಮಾಣು ಇಂಗಾಲವೇ ಆಗಿರಬೇಕು. ಖ ಮತು ್ತಖ' ಪುಂಜಗಳರಡೂವಾಗಿದ್ದಲ್ಲಿ ಮಿಶ್ರಕೀಟೋನ್ ಆಲಿಫ್ಯಾಟಿಕ್ ಕೀಟೋನ್, ಖ ಮತು ್ತಖ' ಗಳಲ್ಲಿ ಒಂದಾದರೂ ಅರೈಲ್ ಪುಂಜವಾಗಿದ್ದಲ್ಲಿ ಆರೋಮ್ಯಾಟಿಕ್ ಕೀಟೋನುಗಳು ಲಭಿಸುತ್ತವೆ. ಕಾರ್ಬೊನಿಲ್ ಪುಂಜ ಪರಮಾಣುವೃತ್ತ (ರಿಂಗ್ ಆಫ್ ಎ ಸೈಕ್ಲಿಕ್ ಕಾಂಪೌಂಡ್) ಒಂದರ ಭಾಗವಾಗಿದ್ದಲ್ಲಿ ಅದನ್ನು ಸೈಕ್ಲಿಕ್ ಕೀಟೋನ್ ಎನ್ನುತ್ತೇವೆ. 

 ಕೀಟೋನುಗಳನ್ನು ತಯಾರಿಸಲು ಉಪಯೋಗಿಸುವ ಹಲವಾರು ವಿಧಾನಗಳಲ್ಲಿ ಕೆಲವು ಮುಖ್ಯವಾದುವನ್ನು ಕೆಳಗೆ ವಿವರಿಸಲಾಗಿದೆ.

 1. ಉತ್ಕರ್ಷಣ (ಆಕ್ಸಿಡೇಷನ್) ಅಥವಾ ಡೀಹೈಡ್ರೋಜನೀಕರಣದಿಂದ ದ್ವಿತೀಯಕ ಆಲ್ಕೋಹಾಲುಗಳನ್ನು ಕೀಟೋನುಗಳಾಗಿ ಪರಿವರ್ತಿಸಬಹುದು. ವೇಗವರ್ಧಕಗಳ ಸಾನ್ನಿಧ್ಯದಲ್ಲಿ ಆಮ್ಲಜನಕದ ನೆರವಿನಿಂದ ಕೆಳಗೆ ತೋರಿಸಿರುವ ಸಮೀಕರಣಕ್ಕೆ ಅನುಗುಣವಾಗಿ ಉತ್ಕರ್ಷಣವನ್ನು ಸಾಧಿಸಿ ಕೀಟೋನುಗಳನ್ನು ತಯಾರಿಸಬಹುದು.

 

ಚಿತ್ರ-2

 

 ಆಮ್ಲಜನಕವನ್ನು ಒದಗಿಸದೆಯೂ ವೇಗವರ್ಧಕಗಳ ಸಹಾಯದಿಂದ ಕೀಟೋನುಗಳನ್ನು ತಯಾರಿಸಬಹುದು. ಈ ಬಗೆಯ ಕ್ರಿಯೆಯಲ್ಲಿ ನೀರಿಗೆ ಬದಲಾಗಿ ಜಲಜನಕದ ಬಿಡುಗಡೆಯಾಗುತ್ತದೆ.

 

ಚಿತ್ರ-3

 

 ಪೊಟ್ಯಾಸಿಯಂ ಡೈ ಕ್ರೋಮೇಟಿನಂಥ ರಾಸಾಯನಿಕ ಉತ್ಕರ್ಷಣಕಾರಿಗಳ ನೆರವಿನಿಂದಲೂ ಈ ಡೀ ಹೈಡ್ರೋಜನೀಕರಣವನ್ನು ಸಾಧಿಸಬಹುದು. ಅದನ್ನೇ ಇಲ್ಲಿರುವ ಸಮೀಕರಣದಲ್ಲಿ ತೋರಿಸಲಾಗಿದೆ.

 

ಚಿತ್ರ-4

 

 2. ಅಪರ್ಯಾಪ್ತ ಸಂಯುಕ್ತಗಳನ್ನು ಓಜೊóೀನಿನೊಡನೆ ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಿದಾಗ ಓಜೊóೀನೈಡುಗಳ ಸೃಷ್ಟಿಯಾಗುತ್ತದೆ. ಇವನ್ನು ವೇಗವರ್ಧಕವೊಂದರ ಸಾನ್ನಿಧ್ಯದಲ್ಲಿ ಜಲಜನಕದೊಡನೆ ಸಂಯೋಗಿಸಿದಾಗ ಓಜೋನೈಡ್ ವಿಭಜನೆಯಾಗಿ ಆಲ್ಡಿಹೈಡ್ ಮತ್ತು/ಅಥವಾ ಕೀಟೋನುಗಳ ಉತ್ಪತ್ತಿಯಾಗುತ್ತದೆ. ಉತ್ಪತ್ತಿಯಾಗುವ ಕಾರ್ಬೊನಿಲ್ ಸಂಯುಕ್ತಗಳು ಮೂಲ, ಅಪರ್ಯಾಪ್ತ ಸಂಯುಕ್ತವನ್ನು ಅವಲಂಬಿರುತ್ತವೆ. ಈ ಬಗೆಯ ಕೀಟೋನ್ ಸಂಯೋಜನೆಯನ್ನು ಕೆಳಗೆ ತೋರಿಸಿರುವ ಸಮೀಕರಣದಿಂದ ನಿದರ್ಶಿಸಬಹುದು.

 

ಚಿತ್ರ-5

 

 3. ಸಾವಯವ ಆಮ್ಲಗಳನ್ನು ವೇಗವರ್ಧಕಗಳ ಸಾನ್ನಿಧ್ಯದಲ್ಲಿ ಉಷ್ಣಕ್ರಿಯೆಗೆ (ಪೈರೊಲಿಸಿಸ್) ಒಳಪಡಿಸಿದಾಗ ಕೀಟೋನುಗಳ ಸೃಷ್ಟಿಯಾಗುತ್ತದೆ. 4000-4500 ಸೆಂ. ಉಷúತೆಯಲ್ಲಿರುವ ಥೋರಿಯಂ ಆಕ್ಸೈಡಿನ ಮೇಲೆ ಆಮ್ಲಗಳನ್ನು ಹಾಯಿಸಿ ಈ ಕ್ರಿಯೆಯಲ್ಲಿ ಸಾಧಿಸಬಹುದು. ಎರಡು ಆಮ್ಲಗಳ ಮಿಶ್ರಣವನ್ನು ಉಪಯೋಗಿಸಿ ಮಿಶ್ರ ಕೀಟೋನುಗಳನ್ನು ಈ ಕೆಳಗೆ ತೋರಿಸಿರುವ ಸಮೀಕರಣಕ್ಕೆ ಅನುಗುಣವಾಗಿ ತಯಾರಿಸಬಹುದಾದರೂ ಅದೇ ಸಮಯದಲ್ಲಿ ಸರಳ ಕೀಟೋನುಗಳ ಸೃಷ್ಟಿಯೂ ಆಗುವುದರಿಂದ ಮಿಶ್ರ ಕೀಟೋನುಗಳ ಉತ್ಪತ್ತಿ ಕಡಿಮೆ ಇರುತ್ತದೆ.

 

ಚಿತ್ರ-6

 

 ಸಾವಯವ ಆಮ್ಲಗಳಿಂದ ಕೀಟೋನುಗಳನ್ನು ತಯಾರಿಸುವ ಮತ್ತೊಂದು ವಿಧಾನವೂ ಬಳಕೆಯಲ್ಲಿದೆ. ಸಾವಯವ ಆಮ್ಲಗಳ ಕ್ಯಾಲ್ಸಿಯಂ ಲವಣಗಳನ್ನು ಉಷ್ಣಕ್ರಿಯೆಗೆ ಒಳಪಡಿಸಿ ಬಟ್ಟಿಯಿಳಿಸಿದಾಗಲೂ ಕೀಟೋನುಗಳ ಉತ್ಪತ್ತಿಯಾಗುತ್ತದೆ.

 

ಚಿತ್ರ-7

 

 ಎರಡು ಬಗೆಯ ಆಮ್ಲಗಳ ಲವಣಗಳನ್ನು ಒಟ್ಟಗೆ ಉಪಯೋಸಿದಾಗ ಸರಳ ಕೀಟೋನುಗಳೊಡನೆ ಅಲ್ಪ ಪ್ರಮಾಣದಲ್ಲಿ ಮಿಶ್ರ ಕೀಟೋನುಗಳ ಉತ್ಪಾದನೆಯೂ ಆಗುತ್ತದೆ.

 4 ಗ್ರಿನಾರ್ಡ್ ಅಥವಾ ಮತ್ತತರ ಸಾವಯವ ಲೋಹ ಸಂಯುಕ್ತಗಳನ್ನು ಉಪಯೋಗಿಸಿ ಸರಳ ಅಥವಾ ಮಿಶ್ರ ಕೀಟೋನುಗಳನ್ನು ತಯಾರಿಸಬಹುದು. ಈ ಬಗೆಯ ತಯಾರಿಕೆಗಳನ್ನು ಕೆಳಗೆ ಸಮೀಕರಣಗಳಿಂದ ನಿದರ್ಶಿಸಬಹುದು.

 

ಚಿತ್ರ-8

 

 5 ಎಸ್ಟರುಗಳು ಪಟು (ಆಕ್ಟಿವ್) ಜಲಜನಕವನ್ನುಳ್ಳ ಇತರ ಸಂಯುಕ್ತಗಳೊಡನೆ ಸಂಯೋಗಿಸಿದಾಗ ಕೀಟೋನುಗಳ ಸೃಷ್ಟಿಯಾಗುತ್ತದೆ. ಈ ಬಗೆಯ ಕೀಟೋನ್ ಸಂಯೋಜನೆಯ ನಿದರ್ಶನವಾಗಿ ಕೆಳಗಿರುವ ಸಮೀಕರಣವನ್ನು ಬರೆಯಲಾಗಿದೆ:

ಅಊ3-ಅಔ-ಅ2ಊ5+ಊ-ಅಊ2-ಅಔ-ಔಅ2ಊ5

ಎಸ್ಟರುಅಊ3-ಅಔ-ಅಊ2-ಅಔ-ಔಅ2ಊ5+ ಅ2ಊ5-ಔಊ

 (ಕಾರ್ಬೊನಿಲ್ ಪುಂಜದ ಪಕ್ಕದಲ್ಲಿರುವ ಇಂಗಾಲಕ್ಕೆ ಸೇರಿದ ಜಲಜನಕ ಪಟುವಾದುದು. ಮೇಲಿನ ಪಕ್ಕದಲ್ಲಿರುವ ಪಟುಜಲಜನಕವನ್ನು ಕೆಳಗೆ ಗೆರೆ ಹಾಕಿ ತೋರಿಸಿದೆ.)

ಈ ವಿಧಾನವನ್ನೂ ಸಾವಯವ ಲೋಹಸಂಯುಕ್ತಗಳನ್ನು ಉಪಯೋಗಿಸುವ ವಿಧಾನಗಳನ್ನೂ ಅನೇಕ ಸಂಕೀರ್ಣ (ಕಾಂಪ್ಲೆಕ್ಸ್) ಸಾವಯವ ಸಂಯೋಜನೆಗಳಲ್ಲಿ ಉಪಯೋಗಿಸಲಾಗಿದೆ.

 ರಾಸಾಯನಿಕ ಗುಣಲಕ್ಷಣಗಳಲ್ಲಿ ಕೀಟೋನ್ ಆಲ್ಡಿಹೈಡ್‍ಗಳಿಗೆ (ಕಾರ್ಬೊನಿಲ್ ಪುಂಜವನ್ನುಳ್ಳ ಸಾವಯವ ಸಂಯುಕ್ತಗಳ ಮತ್ತೊಂದು ವರ್ಗ) ಬಹಳ ಸಾಮ್ಯವಿದೆ. ಈ ಎರಡು ವರ್ಗದ ಸಂಯುಕ್ತಗಳಲ್ಲೂ ಇರುವ ಕಾರ್ಬೊನಿಲ್ ಪುಂಜದಲ್ಲಿ ಭಾಗಶಃ ಧನ-ಋಣ ವಿದ್ಯುದಂಶಗಳ ಅಗಲಿಕೆ ಇರುವುದು ಕಂಡುಬರುತ್ತದೆ. ಈ ಅಗಲಿಕೆಯೇ ಕಾರ್ಬೊನಿಲ್ ಸಂಯುಕ್ತಗಳ ಭಾಗವಹಿಸುವ ಬಹು ಕ್ರಿಯೆಗಳನ್ನು ನಿರ್ದೇಶಿಸುತ್ತದೆ. ಕೀಟೋನುಗಳ ಅನೇಕ ರಾಸಾಯನಿಕ ಕ್ರಿಯೆಗಳನ್ನು ಕಾರ್ಬೊನಿಲ್ ಪುಂಜ ಇಂಗಾಲ ಮತ್ತು ಆಮ್ಲಜನಕ ಪರಮಾಣುಗಳ ನಡುವಣ ದ್ವಿಬಂಧಕ್ಕೆ ಆಗುವ ಸಂಕಲನಗಳೆಂದು ಪರಿಗಣಿಸಬಹುದು. ಕೀಟೋನುಗಳು ಸಾಮಾನ್ಯ ವಾತಾವರಣದಲ್ಲಿ ಸ್ಥಿರವಾಗಿದ್ದರೂ ಅವು ತಕ್ಕಮಟ್ಟಿಗೆ ಪಟುವಾದ ಸಂಯುಕ್ತಗಳು; ಅನೇಕ ರಾಸಾಯನಿಕ ಕ್ರಿಯೆಗಳನ್ನು ಮುಂದೆ ಪರಿಶೀಲಿಸಲಾಗಿದೆ.

 1 ಕಾರ್ಬೊನಿಲ್ ದ್ವಿಬಂಧಕ್ಕೆ ಎರಡು ಜಲಜನಕದ ಪರಮಾಣುಗಳು ಸೇರಿದರೆ ಎರಡನೆಯ ವರ್ಗದ ಆಲ್ಕೊಹಾಲಿನ ಉತ್ಪತ್ತಿಯಾಗುತ್ತದೆ. ಈ ಹೈಡ್ರೊಜನೀಕರಣ ಅಥವಾ ಅಪಕರ್ಷಣವನ್ನು ಲಿಥಿಯಂ ಅಲ್ಯೂಮಿನಿಯಂ ಹೈಡ್ರೈಡ್, ಸೋಡಿಯಂ ಬೋರೋ ಹೈಡ್ರೈಡ್ ಅಥವಾ ಸೋಡಿಯಂ-ಆಲ್ಕೊಹಾಲ್ ಮಿಶ್ರಣಗಳಂಥ ಅಪಕರ್ಷಣಕಾರಿಗಳನ್ನು ಉಪಯೋಗಿಸಿ ಸಾಧಿಸಬಹುದು. ಇಲ್ಲವಾದರೆ ವೇಗವರ್ಧಕಗಳ ಸಾನ್ನಿಧ್ಯದಲ್ಲಿ ಜಲಜನಕವನ್ನಾದರೂ ಉಪಯೋಗಿಸಬಹುದು. ಒಟ್ಟಿನಲ್ಲಿ ಅಪಕರ್ಷಣಕ್ರಿಯೆ ಈ ಸಮೀಕರಣಕ್ಕೆ ಅನುಗುಣವಾಗಿರುತ್ತದೆ.

 

ಚಿತ್ರ-9

 

 ಮತ್ತೊಂದು ಬಗೆಯ ಅಪಕರ್ಷಣದಿಂದ ಕೀಟೋನುಗಳ ಆಮ್ಲಜನಕವನ್ನು ನಿವಾರಿಸಿ ಕಾರ್ಬೊನಿಲ್ ಪುಂಜ ಪೂರ್ಣವಾಗಿ ನಾಶವಾಗುವಂತೆ ಮಾಡಬಹುದು. ಇದನ್ನು ಸಾಧಿಸಲು ಎರಡು ಬಗೆಯ ಅಪಕರ್ಷಣದಲ್ಲಿ ಅಮಾಲ್ಗಂ ಮಾಡಿದ ಸತು ಮತ್ತು ಹೈಡ್ರೊಕ್ಲೋರಿಕ್ ಆಮ್ಲಗಳ ಮಿಶ್ರಣವನ್ನು ಅಪಕರ್ಷಣಕಾರಿಯಾಗಿ ಉಪಯೋಗಿಸಲಾಗುತ್ತದೆ.

 

ಚಿತ್ರ-10

 

ವುಲ್ಫ್ -ಕಿಷ್ನರ-ಹ್ವಾಂಗ್-ಮಿನ್ಲಾನ್ ವಿಧಾನದಲ್ಲಿ ಪೊಟ್ಯಾಸಿಯಂ ಹೈಡ್ರಾಕ್ಸೈಡಿನ ಸಾನ್ನಿಧ್ಯದಲ್ಲಿ ಹೈಡ್ರಜೀóನ್ನನ್ನು ಅಪಕರ್ಷಕವಾಗಿ ಉಪಯೋಗಿಸಲಾಗುತ್ತದೆ. ಅಪಕರ್ಷಣ ಈ ಸಮೀಕರಣಕ್ಕನುಗುಣವಾಗಿ ಆಗುತ್ತದೆ:

 

ಚಿತ್ರ-11

 

 ಈವರೆಗೆ ತಿಳಿಸಿರುವ ಎಲ್ಲ ಅಪಕರ್ಷಣ ವಿಧಿಗಳನ್ನೂ ರಾಸಾಯನಿಕ ಸಂಯೋಜನೆಗಳಲ್ಲಿ ಧಾರಾಳವಾಗಿ ಉಪಯೋಗಿಸಲಾಗುತ್ತಿದೆ.

 2 ಅನೇಕ ಕೀಟೋನುಗಳಿಗೆ ಹೈಡ್ರೋಜನ್ ಸಯನೈಡಿನೊಡನೆ ಸಂಕಲನ ಸಾಧ್ಯ ಕಾರ್ಬೊನಿಲ್ ಪುಂಜಕ್ಕೆ ಹೈಡ್ರೋಜನ್ ಸಯನೈಡ್ ಸಂಕಲನಗೊಂಡಾಗ ಸಯನೋಹೈಡ್ರಿನುಗಳ ಸೃಷ್ಟಿಯಾಗುತ್ತದೆ. ಇವುಗಳಿಂದ ಅನೇಕ ಸಾವಯವ ಆಮ್ಲಗಳನ್ನು ಸಂಯೋಜಿಸಬಹುದು. ಈ ವಿಧಾನದಿಂದ ತಯಾರಿಸಲಾಗುವ ಹೈಡ್ರಾಕ್ಸಿ ಆಮ್ಲಗಳ ಸಂಯೋಜನೆಯನ್ನು ಕೆಳಗಿನ ಸಮೀಕರಣ ಸೂಚಿಸುತ್ತದೆ:

 

ಚಿತ್ರ-12

 

3 ಅನೇಕ ಆಲಿಫ್ಯಾಟಿಕ್ ಕೀಟೋನುಗಳಿಗೆ ಸೋಡಿಯಂ ಬೈಸಲ್ಛೈಟ್ ಸಂಕಲನಗೊಳ್ಳಬಲ್ಲದು.

 

ಚಿತ್ರ-13

 

 ಈ ರಾಸಾಯನಿಕಕ್ರಿಯೆಯನ್ನು ಕೀಟೋನುಗಳ ಶುದ್ಧೀಕರಣಕ್ಕಾಗಿಯೂ ಸಾವಯವ ಸಂಯುಕ್ತಗಳ ಮಿಶ್ರಣಗಳಿಂದ ಕೀಟೋನುಗಳನ್ನು ಬೇರ್ಪಡಿಸುವುದಕ್ಕಾಗಿಯೂ ಉಪಯೋಗಿಸುತ್ತಾರೆ. ಕೀಟೋನ್-ಬೈ ಸಲ್ಛೈಟ್ ಸಂಯುಕ್ತಗಳನ್ನು ಸಯನೋ ಹೈಡ್ರಿನುಗಳ ತಯಾರಿಕೆಯಲ್ಲೂ ಉಪಯೋಗಿಸಬಹುದು.

 

ಚಿತ್ರ-14

 

 4. ಕೀಟೋನುಗಳನ್ನು ಮೆಗ್ನೀಷಿಯಂ ಮತ್ತು ಮೆಗ್ನೀಷಿಯಂಲವಣಗಳೊಡನೆ ರಾಸಾಯನಿಕಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಿ ಗ್ಲೈಕಾಲುಗಳನ್ನು ಉತ್ಪಾದಿಬಹುದು. ಈ ಕ್ರಿಯೆ ನಡೆಯುವ ಬಗೆ ಹೀಗಿರಬಹುದೆಂದು ಭಾವಿಸಲಾಗಿದೆ:

 

ಚಿತ್ರ-15

 

 ಈ ವಿಧಾನದಿಂದ ತಯಾರಾಗುವ ಪಿನಕೋಲುಗಳೆಂಬ ಗ್ಲೈಕಾಲುಗಳೊಡನೆ ಪ್ರಬಲ ಸಲ್ಛ್ಯೂರಿಕ್ ಆಮ್ಲ ವರ್ತಿಸಿದಾಗ ಪಿನಕೊಲೋನುಗಳೆಂಬ ಹೊಸ ಕೀಟೋನುಗಳ ಸೃಷ್ಟಿಯಾಗುತ್ತದೆ. ಪಿನಕೊಲೋನ್ ಸೃಷ್ಟಿಯ ಬಗೆಯನ್ನು ಈ ಸಮೀಕರಣದಿಂದ ಅರಿಯಬಹುದು.

 

ಚಿತ್ರ-16

 

 ಈ ಕ್ರಿಯೆ ಪಿನಕೊಲೋನ್ ರಿಆರೇಂಜ್‍ಮೆಂಟ್ ಎಂಬ ಹೆಸರಿನಿಂದ ಪರಿಚಿತವಾಗಿದೆ.

 5. ಕೀಟೋನುಗಳಿಗೆ ಆಲ್ಕೊಹಾಲುಗಳ ಸಂಕಲನವಾದಾಗ ಹೆಮಿಅಸಿಟಾಲ್ ಮತ್ತು ಅಸಿಟಾಲುಗಳ ಸೃಷ್ಟಿಯಾಗುತ್ತದೆ.

 

ಚಿತ್ರ-17

 

ಆಲ್ಕೊಹಾಲುಗಳ ಬದಲು ಕೀಟಾಲುಗಳನ್ನು ಉಪಯೋಗಿಸಿದಾಗ ಕೀಟಾಲುಗಳ ಉತ್ಪತ್ತಿಯಾಗುತ್ತದೆ.

 

ಚಿತ್ರ-18

 

 ಹಲವು ಸಾವಯವ ಸಂಯೋಜನೆಗಳಲ್ಲಿ ಕೀಟೋನ್ ಅಂಶ ರಾಸಾಯನಿಕಕ್ರಿಯೆಗಳಲ್ಲಿ ಭಾಗವಹಿಸದಂತೆ ಅದನ್ನು ರಕ್ಷಿಸಲು ಕಾರ್ಬೊನಿಲ್ ಪುಂಜವನ್ನು ಕೀಟಾಲ್ ಆಗಿ ಪರಿವರ್ತಿಸಲಾಗುತ್ತದೆ.

 6 ಗ್ರಿನಾರ್ಡ್‍ಸಂಯುಕ್ತಗಳ ನೆರವಿನಿಂದ ಕೀಟೋನುಗಳನ್ನು ಮೂರನೆಯ ವರ್ಗದ ಆಲ್ಕೊಹಾಲುಗಳಾಗಿ ಪರಿವರ್ತಿಸಬಹುದು. ಈ ಕ್ರಿಯೆಯನ್ನು ಕೆಳಗಿರುವ ಸಮೀಕರಣದಲ್ಲಿ ತೋರಿಸಿದೆ.

 

ಚಿತ್ರ-19

 

 7. ಅಮೈನೋ ಪುಂಜವನ್ನುಳ್ಳ (-ಓಊ2) ಅಮೈನ್, ಹೈಡ್ರಾಕ್ಸಿಲಮೈನ್ ಸೆಮಿ ಕಾರ್ಬಜೆóೈಡ್ ಮತ್ತು ಅನೇಕ ಹೈಡ್ರಜಿóೀನ್ನುಗಳೊಡನೆ ಕೀಟೋನುಗಳು ರಾಸಾಯನಿಕ ಕ್ರಿಯೆಗಳಲ್ಲಿ ಭಾಗವಹಿಸಿ ಇಮೈನ್, ಆಕ್ಸಿಮ್, ಸೆಮಿಕಾರ್ಬಜೊóೀನ್ ಮತ್ತು ಹೈಡ್ರಜೊóೀನ್‍ಗಳೆಂಬ ವಿವಿಧ ಸಂಯುಕ್ತಗಳ ಉತ್ಪತ್ತಿಗೆ ಕಾರಣವಾಗುತ್ತವೆ. ಈ ಕ್ರಿಯೆಗಳು ಮುಂದೆ ತೋರಿಸಿರುವ ಸಮೀಕರಣಗಳಿಂದ ವಿಶದವಾಗುತ್ತವೆ:

 

ಚಿತ್ರ-20

 

 ಈ ಕ್ರಿಯೆಗಳನ್ನು ಕೀಟೋನುಗಳ ಅನನ್ಯತೆಯನ್ನು (ಐಡೆಂಟಿಟಿ) ಸಾಧಿಸಲು ವಿಶೇಷವಾಗಿ ಉಪಯೋಗಿಸಲಾಗುತ್ತಿದೆ.

 ಕೀಟೋನ್ ವರ್ಗಕ್ಕೆ ಸೇರಿದ ಅತಿ ಸರಳ ಮತ್ತು ಸಾಮಾನ್ಯ ಸಂಯುಕ್ತ ಅಸಿಟೋನ್. ಇದರ ಅಣುಸೂತ್ರ ಅಊ3ಅಔಅಊ3. ಆರೋಗ್ಯವಂತರ ಮೂತ್ರದಲ್ಲಿ ಈ ಸಂಯುಕ್ತ ಅತ್ಯಲ್ಪ ಪ್ರಮಾಣದಲ್ಲಿರುವುದು. ಆದರೆ ಸಿಹಿಮೂತ್ರ ರೋಗವುಳ್ಳವರ ಮೂತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿರುವುದು ಕಂಡುಬಂದಿದೆ.

 ಪ್ರಯೋಗಶಾಲೆಯಲ್ಲಿ ಮತ್ತು ಅನೇಕ ಕೈಗಾರಿಕೆಗಳಲ್ಲಿ ಅಸಿಟೋನನ್ನು ದ್ರಾವಕವಾಗಿ ಅಧಿಕ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಅಸಿಟೋನನ್ನು ದ್ರಾವಕವಾಗಿ ಉಪಯೋಗಿಸುವ ಹಿರಿಯ ಕೈಗಾರಿಕೆಗಳಲ್ಲಿ ಕೃತಕ ರೇಷ್ಮೆಯ ಉತ್ಪಾದನೆಯೂ ಒಂದು. ಕ್ಯಾಲ್ಸಿಯಂ ಅಸಿಟೇಟನ್ನು ಉಷ್ಣಕ್ರಿಯೆಗೆ ಒಳಪಡಿಸಿ ಅಸಿಟೋನನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಪಿಷ್ಟ ಮೊದಲಾದ ಪ್ರೋಟೀನುಗಳಿಂದ ಮತ್ತು ಬ್ಯಾಕ್ಟೀರಿಯಗಳ ನೆರವಿನಿಂದ ಅಸಿಟೋನನ್ನು ತಯಾರಿಸಬಹುದು. ದ್ರಾವಕವಾಗಿ ಮಾತ್ರವಲ್ಲದೆ ಅನೇಕ ಇತರ ಸಂಯುಕ್ತಗಳ ಉತ್ಪಾದನೆಗಳಲ್ಲೂ ಅಸಿಟೋನನ್ನು ಉಪಯೋಗಿಸುತ್ತಾರೆ. ಕೆಲವು ಬಗೆಯ ಪ್ಲಾಸ್ಟಿಕುಗಳ ತಯಾರಿಕೆಯಲ್ಲಿ ಪ್ಲಾಸ್ಟಿಕಿನ ಸಾಂದ್ರತೆಯನ್ನು ಇಳಿಸಿ ಗಾತ್ರವನ್ನು ಹೆಚ್ಚಿಸಲು ಅಸಿಟೋನನ್ನು ಉಪಯೋಗಿಸುತ್ತಾರೆ. ಹಲವು ಆಸ್ಫೋಟಕಗಳಿಗೆ ಬೇಕಾಗುವ ಧೂಮರಹಿತ ಚೂರ್ಣದ ತಯಾರಿಕೆಗೆ ಅಸಿಟೋನ್ ಅಗತ್ಯ. ಇಷ್ಟೆ ಅಲ್ಲದೆ ಕ್ಲೋರೋ ಫಾರಂ ಅಯಡೋಫಾರಂ, ಅಯನೋನ್ ಸುಗಂಧಗಳು, ಸಲ್ಛೋನಾಲ್ ಮತ್ತು ಕ್ಲೋರಟೋನುಗಳೆಂಬ ಔಷಧಗಳ ತಯಾರಿಕೆಗಳಿಗೆ ಬೇಕಾಗುವ ಮೂಲ ಸಾಮಗ್ರಿಗಳಲ್ಲಿ ಅಸಿಟೋನ್ ಒಂದು ಮುಖ್ಯ ಸಂಯುಕ್ತ.

 ನಮಗೆ ದಿನಬಳಕೆಯಾಗಿರುವ ಅನೇಕ ವಸ್ತುಗಳಲ್ಲಿ ಕೀಟೋನುಗಳಿರುವುದು ತಿಳಿದುಬಂದಿದೆ. ಶುಂಠಿಯ ತೀಕ್ಷ್ಣವಾದ ರುಚಿಗೆ ಅದರಲ್ಲಿರುವ ಜಿಂಜೆರೋನ್ ಮತ್ತು ಷೋಗವೋಲ್ ಎಂಬ ಎರಡು ಕೀಟೋನುಗಳೇ ಕಾರಣ.

 

ಚಿತ್ರ-21

 

 ಸಾಮಾನ್ಯವಾಗಿ ಕೀಟೋನುಗಳು ದ್ರವಗಳು; ಮತ್ತು ಅವುಗಳ ವಾಸನೆ ಅಹಿತಕರವೇನಲ್ಲ. ಹಲವು ಕೀಟೋನುಗಳ ವಾಸನೆಗಳಂತೂ ಜನಸಾಮನ್ಯರಿಗೆ ಪರಿಚಿತವಾಗಿವೆ. ಮಂಗಳಾರತಿಗೆ ಉಪಯೋಗಿಸುವ ಕರ್ಪೂರ ಒಂದು ಕೀಟೋನ್. ಕಸ್ತೂರಿಯ ಪರಿಮಳಕ್ಕೆ ಕಾರಣವಾಗಿರುವ ಸಂಯುಕ್ತ ಮಸ್ಕೋನ್ ಎಂಬ ಒಂದು ಕೀಟೋನ್. ಸಿವೆಟೋನ್ ಎಂಬ ಮತ್ತೊಂದು ಕೀಟೋನ್ ಪುನುಗಿನ ಸುವಾಸನೆಗೆ ಕಾರಣ.

 

ಚಿತ್ರ-22

 

 ಇವಲ್ಲದೆ ಕೃತಕವಾಗಿ ತಯಾರಿಸಲಾದ ಹಲವು ಕೀಟೋನುಗಳನ್ನೂ ಸುಗಂಧದ ಉದ್ದಿಮೆಯಲ್ಲಿ ಉಪಯೋಗಿಸುತ್ತಾರೆ. ಹತ್ತರಿಂದ ಹನ್ನೆರಡು ಪರಮಾಣುಗಳನ್ನುಳ್ಳ ಸೈಕ್ಲಿಕ್ ಕೀಟೋನುಗಳ ವಾಸನೆ ಕರ್ಪೂರದ ವಾಸನೆಯನ್ನು ಹೋಲುತ್ತದೆ. ಹದಿಮೂರು ಪರಮಾಣುಗಳನ್ನುಳ್ಳ ಸೈಕ್ಲಿಕ್ ಕೀಟೋನ್ ದೇವದಾರುವಿನ ವಾಸನೆಯನ್ನುಳ್ಳದ್ದು. ಹದಿನಾಲ್ಕರಿಂದ ಹದಿನೆಂಟು ಪರಮಾಣುಗಳನ್ನುಳ್ಳ ಕೀಟೋನುಗಳ ವಾಸನೆಗೂ ಮಸ್ಕೋನಿನ ವಾಸನೆಗೂ ಸಾಮ್ಯವಿದೆ. ಮಸ್ಕೋವಿನ ವಾಸನೆಯನ್ನು ಬಹುಮಟ್ಟಿಗೆ ಹೋಲುವ ವಾಸನೆಯನ್ನುಳ್ಳ ಹದಿನೈದು ಪರಮಾಣುಗಳನ್ನೂಳ್ಳ ಎಕ್ಸಾಲ್ಟೋನ್ ಎಂಬ ಸೈಕ್ಲಿಕ್ ಕೀಟೋನನ್ನು ಸುಗಂಧದ ಕೈಗಾರಿಕೆಯಲ್ಲಿ ಅಧಿಕ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.

 ಹಲವು ಪ್ರಕೃತಿದತ್ತ ಆರೋಮ್ಯಾಟಿಕ್ ಕೀಟೋನುಗಳನ್ನು ಬಣ್ಣದ ಕೈಗಾರಿಕೆಯಲ್ಲಿ ಉಪಯೋಗಿಸುತ್ತಾರೆ.

 

(ಕೆ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ